Teachers for Inclusive Society

ವಲಸೆ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು

ನೀಲಮ್ಮ ನಮ್ಮ ಶಿಕ್ಷಕ ಕಲಿಕಾ ಕೇಂದ್ರಕ್ಕೆ (ಟಿಎಲ್‍ಸಿ) ಖಾಯಂ ಆಗಿ ಭೇಟಿಕೊಡುತ್ತಿರುವ ಓರ್ವ ಶಿಕ್ಷಕಿ. ಅಲ್ಲಿಯ ಸಭೆಗಳಲ್ಲಿ ಆಕೆಯ ಭಾಗವಹಿಸುವಿಕೆಯಿಂದ ಅವರು ನಮಗೆ ಚೆನ್ನಾಗಿ ಪರಿಚಿತರು.

Print Friendly, PDF & Email

ವಲಸೆ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು

ಶಿಕ್ಷಕಿ – ನೀಲಮ್ಮ,
ಜೈನ್ ಮಾರ್ಟ್ ಸರಕಾರಿ ಹಿಂದಿ ಮಾಧ್ಯಮ ಶಾಲೆ, ಬಳ್ಳಾರಿ ಜಿಲ್ಲೆ

ಲೇ: ಉಮಾಶಂಕರ್ ಪೆರಿಯೋಡಿ ಮತ್ತು ರಚನಾ ಪಟವರ್ಧನ್

This is a translation of the article originally written in English

ಪ್ರಸ್ತಾವನೆ:

ನೀಲಮ್ಮ ನಮ್ಮ ಶಿಕ್ಷಕ ಕಲಿಕಾ ಕೇಂದ್ರಕ್ಕೆ (ಟಿಎಲ್‍ಸಿ) ಖಾಯಂ ಆಗಿ ಭೇಟಿಕೊಡುತ್ತಿರುವ ಓರ್ವ ಶಿಕ್ಷಕಿ. ಅಲ್ಲಿಯ ಸಭೆಗಳಲ್ಲಿ ಆಕೆಯ ಭಾಗವಹಿಸುವಿಕೆಯಿಂದ ಅವರು ನಮಗೆ ಚೆನ್ನಾಗಿ ಪರಿಚಿತರು. ಕೆಲವು ಭೇಟಿಗಳ ನಂತರ ಅವರು ತಿಳಿಸಿದ್ದರು, ಇಡಿ ರಾಜ್ಯದಲ್ಲಿ ಅವರ ಶಾಲೆ ‘ಪೂರ್ಣ ಪ್ರಮಾಣದ ಏಕೈಕ ಹಿಂದಿ ಮಾಧ್ಯಮ ಶಾಲೆ’ ಎಂದು. ಹಿಂದಿ ಮಾಧ್ಯಮದ ಒಂದು ಶಾಲೆ ಶಿಕ್ಷಣ ಇಲಾಖೆಯ ಕೆಳಗೆ ಬೇರೆಲ್ಲೂ ಮುಂದುವರಿಯದಿರುವಾಗ ಅಷ್ಟೂ ದೀರ್ಘ ವರ್ಷಗಳಿಂದ ನಡೆಯುತ್ತಿರುವ ಈ ಶಾಲೆಯ ಬಗ್ಗೆ ನಮಗೆ ಕುತೂಹಲವಾಯಿತು. ಅದರಿಂದಲೇ ಅಲ್ಲಿ ಬೋಧಿಸುವ ಶಿಕ್ಷಕಿ ನೀಲಮ್ಮ ಅವರನ್ನು ಕುರಿತು ತಿಳಿದುಕೊಳ್ಳುವ ಆಸಕ್ತಿ ನಮ್ಮಲ್ಲಿ ಮೂಡಿತು.

ಹಿನ್ನಲೆ:

ಶಿಕ್ಷಕಿ ನೀಲಮ್ಮ ತಮ್ಮ ಪದವಿಯವರೆಗೂ ವಿದ್ಯಾಭ್ಯಾಸವನ್ನು ಬಳ್ಳಾರಿಯಲ್ಲಿ ಮಾಡಿದರು. ಮುಂದೆ ಕನ್ನಡ ಸಾಹಿತ್ಯ ಎಂ.ಎ. ಪದವಿಗೆ ಮೈಸೂರು ವಿಶ್ವವಿದ್ಯಾಲಯಕ್ಕೆ ಹೋದರು. ಅವರು ಹಿಂದಿ ಪ್ರಥಮ ಮತ್ತು ದ್ವಿತೀಯ ಪರೀಕ್ಷೆಗಳನ್ನು ಪಾಸಾದ ನಂತರ ಹಿಂದಿ ಶಿಕ್ಷಕಿಯಾಗಿ ನೇಮಕಗೊಂಡರು. ಈಗ ಅವರ ಸೇವಾವಧಿ 20 ವರ್ಷಗಳನ್ನು ಪೂರೈಸಿದೆ. ಈಗ ಸೇವೆ ಸಲ್ಲಿಸುತ್ತಿರುವ ಹಿಂದಿ ಮಾಧ್ಯಮ ಶಾಲೆಗೆ ಅವರು ವರ್ಗಾವಣೆಗೊಂಡು 7 ವರ್ಷಗಳಾಗಿವೆ.

ಅವರ ಶಾಲೆಯಲ್ಲಿ ಮುಖ್ಯೋಪಾಧ್ಯಾಯರೂ ಸೇರಿ ಐವರು ಶಿಕ್ಷಕ/ಶಿಕ್ಷಕಿಯರಿದ್ದಾರೆ. 1ರಿಂದ 8ರ ವರೆಗಿನ ತರಗತಿಗಳೊಳಗೆ ಒಟ್ಟು 107 ವಿದ್ಯಾರ್ಥಿಗಳಿದ್ದಾರೆ. ಮುಖ್ಯೋಪಾಧ್ಯಾಯರು ಸಮಾಜ ವಿಜ್ಞಾನವನ್ನು ಮತ್ತು ಇನ್ನೊಬ್ಬ  ಶಿಕ್ಷಕಿ ಕನ್ನಡವನ್ನು ಕಲಿಸುತ್ತಾರೆ. ಉಳಿದ ಮೂವರು ಶಿಕ್ಷಕ/ಶಿಕ್ಷಕಿಯರು 1ರಿಂದ 8ರ ವರೆಗಿನ ವಿಜ್ಞಾನ, ಗಣಿತ, ಇಂಗ್ಲೀಷ್ ಮತ್ತು ಹಿಂದಿಯನ್ನು ಕಲಿಸುತ್ತಾರೆ. ಇಲ್ಲಿನ ವಿದ್ಯಾರ್ಥಿಗಳು ಬೇರೆಬೇರೆ ಹಿನ್ನಲೆ ಮತ್ತು ಬೇರೆಬೇರೆ ರಾಜ್ಯಗಳಿಂದ ಬಂದವರಿದ್ದಾರೆ. ಬಹುಸಂಖ್ಯೆಯ ವಿದ್ಯಾರ್ಥಿಗಳು ಆ ಪ್ರದೇಶದ ಜೀನ್ಸ್ ಫ್ಯಾಕ್ಟರಿಯ ಕೂಲಿಕಾರ್ಮಿಕರ ಮಕ್ಕಳು, ಉತ್ತರ ಭಾರತದಿಂದ ಬಂದ ಮತ್ತು ಇಲ್ಲಿ ಬಹಳ ಕಾಲ ಉಳಿಯುವ ಪಾನಿಪೂರಿವಾಲಾ ಮಂದಿಯ ಮಕ್ಕಳು, ಮತ್ತು ಕಟ್ಟಡ ಕೂಲಿಕಾರ್ಮಿಕರ ಮಕ್ಕಳು. ಬಿಹಾರ, ಉತ್ತರಪ್ರದೇಶ, ಅಸ್ಸಾಂ, ಮತ್ತು ರಾಜಸ್ಥಾನ, ಹೀಗೆ ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿದ್ದಾರೆ. ಮಕ್ಕಳು ಸರಾಗವಾಗಿ ಹಿಂದಿ ಮಾತನಾಡುತ್ತಾರೆ, ಅಲ್ಪ ಸ್ವಲ್ಪಕನ್ನಡ ಮಾತನಾಡುತ್ತಾರೆ.

ಈ ಶಾಲೆಯ ಶಿಕ್ಷಕರು ಎದುರಿಸುವ ಎರಡು ಪ್ರಧಾನ ಸವಾಲುಗಳು ಎಂದರೆ, ಕನ್ನಡ ಭಾಷೆಯ ಹಿನ್ನೆಲೆಯ ಇಲ್ಲದ ಮಕ್ಕಳಿಗೆ ಆ ಭಾಷೆಯನ್ನು ಕಲಿಸುವುದು ಮತ್ತು ಎಲ್ಲಾ ವಿಷಯಗಳನ್ನು ಹಿಂದಿ ಮಾಧ್ಯಮದಲ್ಲೇ ಕಲಿಸುವುದು. ಹಾಗೆ ಕಲಿಸುವುದಕ್ಕೆ ಶಿಕ್ಷಕರು ಹಿಂದಿ ಭಾಷೆಯನ್ನು ಸರಾಗವಾಗಿ ಮಾತನಾಡಬಲ್ಲವರಾಗಿರಬೇಕು ಮತ್ತು ಬೋಧಿಸುವ ವಿಷಯದಬಗ್ಗೆ ಸಹ ಸಾಮರ್ಥ್ಯ ಚೆನ್ನಾಗಿರಬೇಕು. ಇದು ದೊಡ್ಡ ಸವಾಲು. ಏಕೆಂದರೆ ಹಿಂದಿ ಈ ಮಕ್ಕಳ ಮಾತೃಭಾಷೆ. ಆ ಭಾಷೆಯಲ್ಲಿ ಮಕ್ಕಳು ಪ್ರವೀಣರು. ಅದೆ ವೇಳೆ ಶಿಕ್ಷಕಕರ ಹಿಂದಿಯ ಜ್ಞಾನ ತಕ್ಕ ಮಟ್ಟದ್ದು ಮಾತ್ರ. ಎರಡನೆ ವಿಷಯ ಬಹುಸಂಖ್ಯೆಯ ಮಕ್ಕಳ ಪೋಷಕರು ಕೂಲಿಕಾರ್ಮಿಕರಿರುವಾಗ ಅವರ ಮಕ್ಕಳು ಕೂಡ ಕುಟುಂಬದ ಜೊತೆ ವಲಸೆ ಅಥವ ವಾಸಸ್ಥಳ ಬದಲಾವಣೆ ಮಾಡುತ್ತ ಇರುವವರು. ಹಾಗಾಗಿ ಅರ್ಧದಲ್ಲಿ ಶಾಲೆ ಬಿಡುವವರ ಮತ್ತು ಸ್ವಲ್ಪ ಕಾಲದ ನಂತರ ವಾಪಸು ಬರುವವರ ಸಂಖ್ಯೆ ದೊಡ್ಡದು. ಹೆತ್ತವರು ತಮ್ಮ ಹುಟ್ಟೂರಲ್ಲಿ ಒಂದು ಮದುವೆಗೆ ಹೋಗಿಬರುವುದಿದ್ದರೂ ಮಕ್ಕಳೂ ಅವರ ಜೊತೆಗೆ ಹೋಗಿ ಕನಿಷ್ಠ ಒಂದು ತಿಂಗಳ ಕಾಲ ಶಾಲೆ ತಪ್ಪಿಸಿಕೊಳ್ಳುತ್ತಿದ್ದರು.

ಗಮನಿಸಿದ ಕೆಲವು ಸಕಾರಾತ್ಮಕ ಅಂಶಗಳು:

ಕೂಲಿಕಾರ್ಮಿಕರು ಮತ್ತು ಪಾನಿಪೂರಿ ಮಾರಾಟಗಾರ ಪೋಷಕರಿಗೆ ಶಾಲೆಯ ಹೆಸರು ಚೆನ್ನಾಗಿ ತಿಳಿದಿದೆ. ಹಾಗಾಗಿ ಹೊಸದಾಗಿ ಬರುವ ಪೋಷಕರು ಈ ಶಾಲೆಯ ಬಗ್ಗೆ ಸುಲಭವಾಗಿ ತಿಳಿದುಕೊಳ್ಳುತ್ತಾರೆ ಮತ್ತು ಪ್ರತಿ ವರ್ಷ ತಮ್ಮ ಮಕ್ಕಳನ್ನು ಸೇರಿಸುವುದಕ್ಕೆ ಬರುತ್ತಾರೆ. ಮಕ್ಕಳು ಬಹಳ ಚುರುಕು ಬುದ್ಧಿಯವರು, ಮತ್ತು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ.ಆ ಮಕ್ಕಳ ಜೊತೆ ಮಾತಾಡಿಸಿದಾಗ ಅವರ ಆತ್ಮವಿಶ್ವಾಸ ಮತ್ತು ಹಲವು ವಿಷಯಗಳನ್ನು ಕುರಿತು ಪರಿಕಲ್ಪನಾಸ್ಪಷ್ಟತೆ ಆಶ್ಚರ್ಯತರುವಂತಿದೆ. ಅದು ಭೂಗೋಳಶಾಸ್ತ್ರವಿರಬಹುದು, ನಮ್ಮ ದೇಶವನ್ನು ಸುತ್ತುವರೆದ ಸಮುದ್ರಗಳಿರಬಹುದು, ಅಥವ ನೆರೆಹೊರೆಯ ರಾಷ್ಟ್ರಗಳಿರಬಹುದು ಅಥವ ಗಣಿತವಿರಬಹುದು. ಕೂಡುವುದು ಮತ್ತು ಗುಣಾಕಾರಗಳನ್ನು ಚೆನ್ನಾಗಿ ವಿವರಿಸಬಲ್ಲವರಾಗಿದ್ದರು. ಒಬ್ಬ ವಿದ್ಯಾರ್ಥಿ ಎದ್ದು ನಿಂತು ನನಗೆ ವಿಜ್ಞಾನದ ಪರಿಭಾಷೆ(ವ್ಯಾಖ್ಯೆ) ಬರುವುದೇ ಎಂದೂ ಕೇಳಿದ. ಆತ ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ತಾನೇ ಅದನ್ನು ಹೇಳಿದ.

ಶಾಲಾ ಅಭಿವೃದ್ಧಿ ಸಮಿತಿಯ ಬೆಂಬಲವೂ ಉತ್ತಮವಾಗಿದೆ. ಅದು ಶಾಲೆಗೆ ಕುಡಿಯುವ ನೀರನ್ನು ಶುದ್ಧೀಕರಿಸುವ ಉಪಕರಣವನ್ನು ದೊರಕಿಸಿಕೊಟ್ಟಿದೆ. ನೀರು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ನೆಲದೊಳಗಿನ ತೊಟ್ಟಿ (ಸಂಪ್) ನಿರ್ಮಿಸಿಕೊಟ್ಟಿದೆ. ಶಿಕ್ಷಕರು ಇದೇ ಉತ್ಸಾಹ ಮುಂದುವರೆಯುವಂತೆ ನೋಡಿಕೊಳ್ಳಲು ತಮ್ಮ ಉತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಹಿಂದಿಯಲ್ಲಿ ನಲಿ-ಕಲಿ ಕಾರ್ಡುಗಳು ಲಭ್ಯವಿಲ್ಲ. ಆದರೆ ಶಿಕ್ಷಕರು ತಮ್ಮಮಟ್ಟದಲ್ಲೇ ತಮಗೆ ತಿಳಿದಿರುವ ವಿಷಯಗಳನ್ನು ಬಳಸಿಕೊಂಡು ಎಳೆಯ ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಶಾಲೆಯು ಮಾರುಕಟ್ಟೆ ಪ್ರದೇಶದ ಇಕ್ಕಟ್ಟಾದ ಸ್ಥಳದಲ್ಲಿದೆ. ಅದರ ಕಟ್ಟಡವು ಬಾಡಿಗೆಗೆ ಪಡೆದಿರುವಂತಹುದು. ಅಂಥದರೊಳಗೂ ಅದರ ಭೌತಿಕ ಪರಿಸರದ ನಿರ್ವಹಣೆ ಅಚ್ಚುಕಟ್ಟಾಗಿದೆ, ಸ್ವಚ್ಛವಾಗಿದೆ. ಅದು ಇರುಕಿನಲ್ಲಿ ಸಿಲುಕಿದೆ ಅನಿಸುವುದಿಲ್ಲ. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಿವೆ.

ಶಿಕ್ಷಕಿ ನೀಲಮ್ಮನವರ ಬಗ್ಗೆ:

ಅಲ್ಲಿಗೆ ಭೇಟಿಕೊಟ್ಟ ಮೇಲೆ ಅಲ್ಲಿಯ ಎಲ್ಲ ಪ್ರಯತ್ನ ಮತ್ತು ಸಾಧನೆಗಳೂ ಅಲ್ಲಿ ಕೆಲಸಮಾಡುವ ಎಲ್ಲ ಶಿಕ್ಷಕ- ಶಿಕ್ಷಕಿಯರ ಒಟ್ಟು ತಂಡದ್ದು ಅನಿಸುತ್ತದೆ. ಮುಖ್ಯ ಶಿಕ್ಷಕರ ಬೆಂಬಲ ಮತ್ತು ಶಾಲಾ ಅಭಿವೃದ್ಧಿ ಸಮಿತಿಯವರ ತೊಡಗಿಸಿಕೊಳ್ಳುವಿಕೆಯೂ ಸುಲಭವಾಗಿ ಗಮನಕ್ಕೆ ಬರುವಂತೆ ಎದ್ದು ಕಾಣುತ್ತದೆ. ಹಾಗಿರುವಾಗಲೂ,ನೀಲಮ್ಮ ಶಿಕ್ಷಕಿಯವರ ಸ್ವಕಲಿಕೆಗಾಗಿ ಮತ್ತು ತರಗತಿಯಲ್ಲಿ ಪಾಠವನ್ನು ಉತ್ತಮವಾಗಿ ಮಾಡಲು ನಡೆಸುತ್ತಿರುವ ಸೂಕ್ಷ್ಮ ಮತ್ತು ಹೆಚ್ಚುವರಿ ಪ್ರಯತ್ನಗಳನ್ನು ಗಮನಿಸದೇ ಇರಲಾಗದು. ಆಕೆ ಉಳಿದ ಶಿಕ್ಷಕರ ಜೊತೆಯಲ್ಲಿ ಕಾರ್ಮಿಕರು ಮತ್ತು ಉತ್ತರ ಭಾರತದ ವಲಸಿಗರು ನೆಲೆಸಿದ ಸ್ಥಳಗಳಿಗೆ ಹುಡುಕಿ ಭೇಟಿಕೊಡುತ್ತಾರೆ. ಅವರಿಗೆ ಮಕ್ಕಳನ್ನು ತಮ್ಮ ಶಾಲೆಗೆ ಕಳಿಸುವಂತೆ ಪ್ರೇರೇಪಿಸುತ್ತಾರೆ. ನಮ್ಮ ಶಾಲೆ ಹಿಂದಿ ಮಾಧ್ಯಮವನ್ನು ಹೊಂದಿದೆ ಎಂದು ತಿಳಿಸಿಕೊಡುತ್ತಾರೆ. ಅವರು ನಮ್ಮ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ ಮತ್ತು ಚಳಿಗಾಲದ ಕಾರ್ಯಾಗಾರದಲ್ಲೂ ಭಾಗವಹಿಸಿದ್ದರು. ಅವರು 1, 2 ಮತ್ತು 3ನೇ ತರಗತಿಯ ಪುಟಾಣಿಗಳಿಗೆ ಬೋಧಿಸುವುದರಿಂದ ಹಿಂದಿ ಪದಪುಂಜ/ಪಾರಿಭಾಷಿಕಗಳಿಗಾಗಿ ಮತ್ತು ಪುಟ್ಟ ಮಕ್ಕಳಿಗೆ ಹಿಂದಿಯಲ್ಲಿ ಬೋಧಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಕೇಂದ್ರೀಯ ವಿದ್ಯಾಲಯಕ್ಕೆ ಆಗಾಗ್ಗೆ ಅವರು ಭೇಟಿನೀಡುತ್ತಾರೆ. ಇತ್ತೀಚೆಗೆ ಅವರು ವಿಜ್ಞಾನವನ್ನು ಬೋಧಿಸುವುದಕ್ಕೆ ಪ್ರಾರಂಭಿಸಿದ್ದಾರೆ. ಅದಕ್ಕಾಗಿ ಅವರು ಹೊಸ ಶಬ್ದಬಂಢಾರ ಮತ್ತು ಬೋಧನಾ ತಂತ್ರವನ್ನು ಕರಗತಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಸಕ್ರಿಯವಾಗಿ ನಮ್ಮ ಸಹಾಯವನ್ನು ಕೋರುತ್ತಿರುತ್ತಾರೆ. ಇತ್ತೀಚೆಗೆ ನಡೆದ ಘಟನೆಯಿದು ಅವರ ಹೆಸರನ್ನು ವಿಜ್ಞಾನ ಕಾರ್ಯಾಗಾರಕ್ಕೆ ಆಯ್ಕೆಮಾಡಿಕೊಳ್ಳಲಾಗಿತ್ತು. ಅವರು 8ನೇ ತರಗತಿಯ ಎಲ್ಲಾ ವಿಷಯಗಳ ಬೋಧನೆಗೆ ಇಬ್ಬರೆ ಶಿಕ್ಷಕಿಯರಿದ್ದೇವೆ, ಅವರಿಗೇ ತರಗತಿಯ ಎಲ್ಲ ಹೊರೆಯನ್ನೂ ಹೊರಿಸಿ ಬರಲಾಗದು ಎಂದು ಬಲು ವಿನಯದಿಂದ ನಿವೇದಿಸಿದರು. ಆದರೆ ಕಾರ್ಯಾಗಾರದ 3ನೇ ದಿನ, ಅದು ಶನಿವಾರವಿತ್ತು, ಶಾಲೆ ಮುಗಿಸಿ ಬಂದು ಕಾರ್ಯಾಗಾರದ ಉಳಿದ ಭಾಗದಲ್ಲಿ ಭಾಗವಹಿಸಿದರು.
ಹಿಂದಿನ ದಿನಗಳಲ್ಲಿ ಕಲಿಸಿದ ಎಲ್ಲಾ ತಂತ್ರಗಳನ್ನು ಕಲಿಯಲು ಅವರು ಪ್ರಯತ್ನಿಸಿದರು ಮತ್ತು ನಾನು ಅವಳ ಶಾಲೆಗೆ ಹೋದಾಗ, ಅವಳು ಸೂಕ್ಷ್ಮದರ್ಶಕವನ್ನು ಹೊರ ತೆಗೆದಿದ್ದರು ಮತ್ತು ಅದನ್ನು ತಕ್ಷಣವೇ ಬಳಸಲು ಸರಿಯಾಗಿ ಸಜ್ಜುಗೊಳಿಸಲು ಪ್ರಯತ್ನಿಸುತ್ತಿದ್ದರು. ನಮ್ಮ ಟಿಎಲ್‌ಸಿಯಲ್ಲಿ ಬಹಳಷ್ಟು ಹಿಂದಿ ಕಥೆ ಪುಸ್ತಕಗಳನ್ನು ಪಡೆಯುತ್ತಿದ್ದೇವೆ ಮತ್ತು ಅವರು ಅದನ್ನು ನಿಯತವಾಗಿ ಶಾಲೆಗೆ ತೆಗೆದು ಕೊಂಡು ಹೋಗುತ್ತಾರೆ ಮತ್ತು ಮಕ್ಕಳ ಪ್ರತಿಕ್ರಿಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನೀಲಮ್ಮ ತಾವು ಮಾಡುತ್ತಿರುವ ಉತ್ತಮ ಕೆಲಸದ ಬಗ್ಗೆ ಬಹಳವಾಗಿಹೇಳಿಕೊಳ್ಳುವವರಲ್ಲ . ಅವರು ತಮ್ಮ ಅಸಾಧಾರಣ ಸಾಧನೆಗಳ ಕುರಿತು ಗಟ್ಟಿಯಾಗಿ ಹೇಳಿಕೊಳ್ಳುವವರಾಗಿ ಎಂದೂ ಕಂಡಿಲ್ಲ. ಆದರೆ ಅವರೊಂದಿಗೆ ಮಾತಾಡುವುದು ಮತ್ತು ಶಾಲೆಯಲ್ಲಿ ತಮ್ಮ ಪಾತ್ರದಬಗ್ಗೆ ಅವರ ಕಾಣ್ಕೆಯ ಹಿಂದಿರುವ ತತ್ವಗಳನ್ನು ಅರ್ಥ ಮಾಡಿಕೊಳ್ಳುವುದು ವಿಶೇಷ ಮತ್ತು ಆಸಕ್ತಿದಾಯಕ ಅನುಭವ.

ಉಮಾಶಂಕರ್ ಪೆರಿಯೋಡಿ:

ಉಮಾಶಂಕರ್ ಪೆರಿಯೋಡಿಯವರು ಅಜೀಂ ಪ್ರೇಮ್‌ಜೀ ಫೌಂಡೇಷನ್ನಿನ ಕರ್ನಾಟಕ ರಾಜ್ಯದ ಮುಖ್ಯಸ್ಥರು. ಅಭಿವೃದ್ಧಿ ಕ್ಷೇತ್ರದಲ್ಲಿ ಎರಡು ದಶಕಗಳ ಕಾರ್ಯಾನುಭವ ಅವರಿಗಿದೆ. ಬುಡಕಟ್ಟು ಜನರು ಮತ್ತು ಇತರೆ ಕಡೆಗಣಿತ ಜನವರ್ಗಗಳ ಜೊತೆ ಕೆಲಸಮಾಡಿದ್ದಾರೆ. ಫೌಂಡೇಷನ್ನಿನಲ್ಲಿ ಅವರು ೨೦೦೩ರಿಂದ ವಿಭಿನ್ನ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದಾರೆ.

ರಚನಾ ಪಟವರ್ಧನ್:

ರಚನಾ ಪಟವರ್ಧನ್ ಪರಿಸರ ವಿಜ್ಞಾನ ಹಿನ್ನಲೆಯವರು. ಅವರು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಬಳ್ಳಾರಿ ಜಿಲ್ಲಾ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಪ್ರಸ್ತುತ ಅವರು ಫೌಂಡೇಷನ್‌ನ “ಜಿಲ್ಲಾ ಉಪಕ್ರಮಗಳ” ಪ್ರೋಗ್ರಾಂ ಮ್ಯಾನೇಜ್‌ಮೆಂಟ್ ತಂಡದಲ್ಲಿದ್ದಾರೆ.

Print Friendly, PDF & Email

Leave a Reply

Your email address will not be published.

Scroll to top